ಕಳೆದ ೨ ವರ್ಷಗಳಿಂದ ಈ ನನ್ನ ಬ್ಲಾಗ್ ನಲ್ಲಿ ಯಾವುದೇ ಕವನಗಳನ್ನ ಪ್ರಕಟಿಸಿಲ್ಲ. ಅದಕ್ಕಾಗಿ ಒಂದು ಕ್ಷಮೆ ಇರಲಿ. ನಿಮೆಲ್ಲರ ಪ್ರೋತ್ಸಾಹ ಕಂಡು ನಿಜಕ್ಕೂ ಮನಸು ತುಂಬಿ ಬಂದಿದೆ… ನನ್ನ ಬ್ಲಾಗ್ ಅನ್ನು ೧ ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ, ಹಾಗು ಹಲವು ಸಾವಿರ ಜನ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಇದು ನಿಜಕ್ಕೂ ನನ್ನ ಸೌಭಾಗ್ಯ ಅಲ್ಲವೇ …….

ಕನವಗಳನ್ನು ಪ್ರಕಟಿಸದಿದ್ದರು ನಿಮೆಲ್ಲರ comments ಮತ್ತು subscriptions ಗಳನ್ನೂ ನೋಡುತ್ತಲೇ ಇರುವೆ. ದಿನನಿತ್ಯದ ಬದುಕು ಕಟ್ಟಿಕೊಳ್ಳುವ ವ್ಯವಸಾಯದಲ್ಲಿ ಇಷ್ಟು ದಿನ ಮುಳುಗಿದ್ದೆ . ನಿಮೆಲ್ಲರ ಕನ್ನಡ ಕವನಗಳ ಮೇಲಿನ ಪ್ರೀತಿ  ಹಾಗು ನನ್ನ ಕವನಗಳ ಮೇಲಿನ ವಾತ್ಸಲ್ಯ ಮತ್ತೆ ಬ್ಲಾಗ್ ನಲ್ಲಿ ನಾನು ಬರೆಯುವಂತೆ ಮಾಡಿದೆ. ಇನ್ನು ಮುಂದೆ ಆದಷ್ಟು ಹೆಚ್ಚು ಸಮಯ ಬರವಣಿಗೆಯಲ್ಲಿ ಕಳೆಯುವೆ . ನಿಮೆಲ್ಲರ ಪ್ರೋತ್ಸಾಹ ಹೀಗೆ ಎಂದೆಂದಿಗೂ ಮುಂದುವರಿಯಲಿ.

ನನ್ನನ್ನು ಸಂಪರ್ಕಿಸಲು ಇಕ್ಚಿಸಿದಲ್ಲಿ ದಯಮಾಡಿ Facebook ನಲ್ಲಿ ನನಗೊಂದು friend request ಕಳುಹಿಸಿ, ಹಾಗು ನನ್ನ ಬ್ಲಾಗ್ ಅನ್ನು subscribe ಮಾಡಿಕೊಳ್ಳಿ 

 Facebook ವಿಳಾಸ : https://www.facebook.com/naveenkrhalli

Email ವಿಳಾಸ : naveenkrhlli@yahoo.co.in 

Facebook ನಲ್ಲಿ ಕವನಗಳನ್ನು  ಓದುವ  ಇಕ್ಚೆ ಇದ್ದರೆ ನಮ್ಮ ತಂಡ “3ಕೆ – ಕನ್ನಡ ಕವಿತೆ ಕಥನ” ತಂಡಕ್ಕೆ ಸೇರಿಕೊಳ್ಳಿ ಹಾಗು ನಮೊಂದಿಗೆ ಕನ್ನಡದ ಬಗೆಗಿನ ಪ್ರೀತಿ ಹೆಚ್ಚಿಸಲು ಸಹಕಾರ ಕೊಡಿ 

ವಿಳಾಸ : https://www.facebook.com/groups/kannada3K

ಬನ್ನಿ ಕನ್ನಡವನ್ನು ಪ್ರೀತಿಸೋಣ ಹಾಗು ನಮ್ಮೊಳಗಿನ ಭಾವನೆಗಳನ್ನು ಹಂಚಿಕೊಳ್ಳೋಣ

ಇಂತಿ
ನವೀನ್

Advertisements
Posted by: naveenkrhalli | 11/05/2013

ಪ್ರೀತಿಯ ಆಮಂತ್ರಣ

ಪ್ರೀತಿಯ ಮಿತ್ರರೆಲ್ಲರಿಗೂ ಹೃದಯ ತುಂಬು ಸ್ವಾಗತ…..

Facebook ನ 3K – ಕನ್ನಡ ಕವಿತೆ ಕವನ ಸಂಗವು ಮೇ ೧೨ ರಂದು “ಶತಮಾನಂಭವತಿ” ಎಂಬ ಕವನ ಸಂಕಲನ ಬಿಡುಗಡೆ ಗೊಲಿಸುತ್ತಿದೆ. ಈ ಪುಸ್ತಕದಲ್ಲಿ ನನ್ನದೊಂದು ಕವನ ಮುದ್ರಿತವಾಗಿದೆ ಎಂದು ತಿಳಿಸಲು ನನಗೆ ಹೆಮ್ಮೆ.

ಈ ಕೆಳಗಿನ ಆಮಂತ್ರಣ ಪತ್ರಿಕೆ ನಿಮಗಾಗಿ….. ದಯಮಾಡಿ ಎಲ್ಲರೂ ಬನ್ನಿ
Invitation

ಓಓಓಓ ಅಂತು ಇಂತು ಕೊನೆಗೂ ೫೦೦೦೦ visits complete ಆಯಿತು….

ಪ್ರೀತಿಯ ಮಿತ್ರರೇ,

ನನ್ನ ಬ್ಲಾಗ್ ಅನ್ನು ಇಣುಕಿ ನೋಡಿದ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು……

ನಾನು ಈ ಬ್ಲಾಗ್ ಅನ್ನು ಶುರು ಮಾಡಿದಾಗ ಇಷ್ಟು ದೂರ ಬರುವೆನೆಂದು ಎಂದು ಕಲ್ಪನೆ ಮಾಡಿರಲಿಲ್ಲ.
ಇಂದು ೫೦೦೦೦ visits ಮುಗಿಸಿರುವುದರಿಂದ ಏನೋ ಸಮಾದಾನ…. ಏನೋ ಸಾದಿಸಿದ ನಗು ನನಗೆ….

ತುಂಬು ಹೃದಯದ ಧನ್ಯವಾದಗಳು……..


ಬರೆಯದ ಎಷ್ಟೋ ಸಾಲು ಮನದಲ್ಲಿದೆ. ಬರೆಯಲು ಹೋದರೆ ಕಂಬನಿ ಕಣ್ಣ ಮುಚ್ಚಿಸುತ್ತದೆ.

ಏನು ಮಾಡಲಿ ನಾ, ಇರಲಿ ಬಿಡು ಆ ಮಾತು ನನಲ್ಲಿ, ಅದರಿಂದ ಎಂದು ಕಂಬನಿ ಇಂದ ನಿನ್ನ ನೋಟ ಮರೆಯಾಗದಿರಲಿ.

ಖಾಲಿ ದಾರಿಯಲ್ಲಿ, ಬಿಸಿಲ ಹವೆಯಲ್ಲಿ ನಡೆವಾಗ ನೆನಪಾದೆ ನೀನು.

ಬಿಸಿಲ ಬಯಸಿದ ನಾನು ಕಂಡೆ ನೀ ಕಳುಹಿಸಿದಂತೆ ಮಳೆಯನ್ನೂ.

ನಿನ್ನೊಡನೆ ನಡೆಯಲಾರದಿದ್ದಾಗ ನನಗೇಕೆ ಮಳೆ,

ಕಣ್ಣಿರ ಮರೆಸಲ? ಅಥವ ನಿನ್ನ ನೆನಪನ್ನು ಅಳಿಸಲ?

—-ನವೀನ್

ತುಂಬಾ ದಿನಗಳ ಮೇಲೆ ನಾನು ನನ್ನ ಬ್ಲೋಗಿನಲ್ಲಿ ಒಂದು ಪೋಸ್ಟ್ ಮಾಡುತ್ತಿರುವೆ. ಅದು ಒಂದು ಚುಟುಕಿನ ರೂಪದಲ್ಲಿ. Just ಓದಿ ಎಂಜಾಯ್ ಮಾಡಿ.

ಹಾಗೆ ನನ್ನ ಬ್ಲೋಗ್ 25000 visits complete ಮಾಡಿದಕ್ಕೆ ನಿಮಗೆಲ್ಲ ತುಂಬು ಹೃದಯದ ಧನ್ಯವಾದಗಳು….

ಸತ್ತಮೇಲೆ ಎನೈತೆ ಬರಿ ಸೊನ್ನೆ,
ಬದುಕಿದ್ದಾಗ ಸಿಗಲಿಲ್ಲ ಒಂದೂ ಕನ್ಯೆ,
ಇದನ್ನೇ ಯೋಚಿಸುತ್ತಾ ಕುಳಿತಿದ್ದೆ ನಾನು ಮೊನ್ನೆ,
ಬೇಸರವ ಮರೆಸಿತು ಒಂದು ಬಾಟ್ಲೀ ಎಣ್ಣೆ.

—- ನವೀನ್

Posted by: naveenkrhalli | 20/06/2011

ರಾಣಿಯೂ ನೀ……

ಚಂದಿರನ ಮೇಲೆ ಕುಳಿತ ರಾಣಿಯೂ ನೀನು,
ಹೃದಯ ತುಂಬಿ ಪ್ರೀತಿಯ ಕೊಡಲು ನಿಂತ ಪ್ರೇಮಿ ನಾನು.
ಅತೀತ್ತ ನೀ ನೋಡದಿರು ನನ್ನ ಕಂಗಳ ಬಿಟ್ಟು,
ಚಂದಿರನನ್ನೇ ಮರೆತೇ ನಿನ್ನ ಕಂಗಳ ಹೊಲಪನ್ನ ನನ್ನ ಕಂಗಳಲ್ಲಿ ಇಟ್ಟು.
ಜಗವನ್ನೇ ಸುತ್ತುವ ಆಸೆಯೂ ನಿನಗೆ, ಕೈ ಹಿಡಿದು ನಡೆಸುವಾಸೆ ನನಗೆ,
ಮಗುವಂತೆ ನೋಡು ನೀ ನನ್ನ,
ನಿರ್ಮಲವಾದ ಪ್ರೀತಿಯ ಕೊಡುವ ನಾ ಚಿನ್ನ.
ಬಯಸುವೆ ನನ್ನ ಜೀವನ ಹಾದಿಯುದಕ್ಕೂ ನಿನ್ನ,
ಎಂದು ಉಸಿರ ಕಟ್ಟಿಸದಿರು ಮರೆತು ನನ್ನ.
ಮನಸಿನಲ್ಲಿ ಇಟ್ಟು ನಿನ್ನ ನೋಡಿದರೆ ನಾನು,
ಜಗತ್ತೇ ಸುಂದರವೆನಿಸುತ್ತಿದೆ ಇನ್ನ.
ನೊವಲ್ಲು ನಾರುವೆ, ನಲಿವಲ್ಲು ನಾ ಬರುವೆ,
ಜೊತೆ ಜೊತೆಯಾಗಿ ನಡೆದು ಸೇರುವ ನಾವಿಬ್ಬರು ದಡವನ್ಣ,
ನಡುದಾರಿಯಲ್ಲಿ ಎಂದು ಕೈ ಬಿಡದಿರು ಎನ್ನ.

—- ನವೀನ್

ನಿಂತ ಮಳೆಯಲ್ಲಿ, ನಡುಗುತ್ತಿರುವ ಚಳಿಯಲ್ಲಿ, ನೀ ನನ್ನ ಕೈಯ್ಯ ಹಿಡಿದು,
ಹೆಗಲ ಒರಗಿ ನಡೆಯುತ್ತಿದ್ದರೆ, ಜೀವನದಲ್ಲಿ ಬೇರೇನು ಬೇಡವೆಂದೆನಿಸಿತು.
ಚಂದಿರನ ಬೆಳಕಲ್ಲಿ ನಿನ್ನ ಕಂಗಳ ಮಿನುಗು, ನನ್ನ ಪ್ರೀತಿಯ ಮೆಚಿ
ನಲಿವ ನಿನ್ನ ಮುಗುಳ್ನಗೆಯ ಹೊಳಪು, ನೋಡುತ್ತಾ ಕರಗುತ್ತಿಹೆನು ನಾನು.
ನಡುರಾತ್ರಿಯ ನಿಶಬ್ದ ದಾರಿಯಲ್ಲಿ ಎಷ್ಟೇ ದೂರ ಸಾಗಿದರು ದಣಿವಿಲ್ಲ, ನಡೆವ ಹಾದಿಗೆ ಕೊನೇ
ಇಲ್ಲ. ಸಾಗುತ್ತಲೇ ಇರಬೇಕೆನ್ನುವಾಸೆ ಜೀವನ ಉದ್ದಕು ಹೀಗೆ, ದಣಿವಾಗದಂತೆ ನಿನಗೆ
ನನ್ನ ಪ್ರೀತಿಯಲ್ಲಿ. ಪ್ರೀತಿಯ ಹಂಚುತ್ತಾ, ಭರವಸೆಯ ನೀಡುತ್ತಾ, ನಿನ್ನ
ನಗುವಿನಲ್ಲಿ ನನ್ನದನ್ನು ಇಟ್ಟು, ನಿನ್ನ ಮನಸಿನಲ್ಲಿ ನನ್ನ ಮನವನಿತ್ತು ಸಾಗುವಾಸೆ
ಈ ಪಯಣದಿ. ಬತ್ತದಿರಲಿ ಪ್ರೀತಿ, ಹುಟ್ಟಾದಿರಲಿ ಭೀತಿ, ಸದಾ ಚಿಮ್ಮಿ ಹೋಮುತ್ತಿರಲಿ ಸಂಪ್ರೀತಿ.

—- ನವೀನ್

Posted by: naveenkrhalli | 03/06/2010

Just ಮಾತ್ ಮಾತಲ್ಲಿ

ಪ್ರೀತಿಸೋ ಸವಿ ಹೃದಯವ ಹೊತ್ತು ಸಾಗಿದೆ ಹಸಿರ ಹೊನಲ ರಾಶಿಯಲ್ಲಿ,
ಎದುರಾದೆ ನೀ ಮುಗುಳ್ನಗೆಯ ಹೊತ್ತು ಜನಸಾಗರದಲ್ಲಿ.
ಪ್ರೀತಿಯ ನನ್ನ ಮನದಲ್ಲಿ ಬಿತ್ತು,ಅರ್ಥವಾಗದ ನಗುವ ನೀ ಹೋದೆ ಬಿಟ್ಟು,
ಹೇಳದೇ ಹೋದೆ ನಗುವಿನ ಅರ್ಥವ,ಬಿತ್ತಿದೆ ಮನದಲ್ಲಿ ಪ್ರೀತಿಯ ಬೀಜವ.
ಹುಡುಕುತ್ತಾ ಹೊರಟೆ ಆ ನಗುವ, ಮತ್ತೆ ಸಿಕ್ಕು ನೀ ನೀಡಿದೆ ಒಲವ.
ಮಾತಿಲ್ಲದೆ ಬೆರೆತವು ಪ್ರೀತಿಯ ಮನಸುಗಳು, ತಿಳಿಯದೇ ಬೇರೆಯಿತು ಕಣ್ಣ ಅಂಚಲ್ಲಿ ಪ್ರೀತಿಯು.
ಸನಿಹವಾಗಿ ಪ್ರೀತಿಯ ಅಮೃತವ ಕುಡಿದೆವು just ಮಾತ್ ಮಾತಲ್ಲಿ,
ಪ್ರೀತಿಯು ಕುಳಿತು ನಲಿಯಿತು ನಮಿಬ್ಬರ ಮನಸು ಮನಸಲ್ಲಿ.

—- ನವೀನ್

Posted by: naveenkrhalli | 14/05/2010

ಅಮ್ಮನಿಗಾಗಿ….(Mother’s day special)

ನನ್ನ ಮೊದಲ ಗೆಳತಿಯಾದೆ ನೀನು, ಕಲಿಸಿದೆ ನಾಲಕ್ಕೂ ಅಕ್ಷರವನ್ನು,
ಪ್ರೀತಿ ಉಣಿಸುತ್ತಲೇ ಎದೇಯೆತ್ತರಕ್ಕೆ ಸಲುಗಿದೆ ನನನ್ನು.
ಇಡೀ ಜಗತನ್ನೆ ಗೆಲ್ಲುವೆ ಒಂದೇ ಕೈಯಲ್ಲಿ ನಾನು,
ಜೊತೆಯಾಗಿ ನಿಂತರೆ ಇನ್ನೊಂದು ಕೈ ಹಿಡಿದು ನೀನು.
ನೋವಾದಾಗ ನನಗೆ ನೀ ಅತ್ತೆ, ನನ್ನ
ನಲಿವಿನಲ್ಲಿ ನೀ ನಕ್ಕೆ, ಸೋಲಲ್ಲೂ ಜೊತೆಯಾಗಿ ನಿಂತೆ ನೀನು,
ಕೈ ಹಿಡಿದು ಮೇಲೆತ್ತಿ ಬದುಕ ದಾರಿಯ ತೋರಿದೆ ನೀನು.
ಸಾಲು ಸಾಲುಗಳು ಗೀಚಿ ಎಸೆದರು ಮುಗಿಯಲಿಲ್ಲ ಸಾಲುಗಳು
ನನಗೆ ನೀ ಮಾಡಿದ ಎಲ್ಲವನ್ನು. ನನಗಾಗಿ ನೀ ಎಸ್ಟು ದಣಿವೆ ಅಮ್ಮ,
ನೀನಿಲ್ಲದೇ ನಾನೇನು ಇಲ್ಲ ನನಮ್ಮ. ಪ್ರೀತಿ ಏನೆಂದು ನೀ ಕಲಿಸಿದೆ,
ನನ್ನ ಕಣ್ಣಿರ ಮೊದಲು ನೀ ಒರೆಸಿದೆ. ಸಾವಿರ ಸಾವಿರ ದಿನಗಳು ಕಳೆದರು
ನೀ ನನ್ನ ಮೊದಲ ಗುರುವಮ್ಮ, ನಾ ಮೆಚ್ಚಿದ ಮೊದಲ ಪ್ರೇಯಸಿ ನೀನಮ್ಮ.
ಯಾರು ಕದಿಯಲಾಗದು ನಿನಗಾಗಿ ಇಟ್ಟ ಪ್ರೀತಿಯನ್ನು, ನಿನ್ನಂತೆ
ಪ್ರೀತಿಸಿಲ್ಲ ಯಾರು ನನನ್ನು ಇನ್ನು. ಅಮ್ಮ ನನ್ನೊಲವು ನೀ, ನನ್ನ ಬದುಕು ನೀ.
I LOVE YOU AMMA.

—- ನವೀನ್

ನೆನಪೆ ನೆನಪಾಗಿ ಉಳಿಯದಿರು, ಮತ್ತೆ ಮತ್ತೆ ಬಂದು ನೀ ಕಾಡದಿರು,
ಕದಿಯಬೇಡ ನೀ ನನ್ನ ನಿದಿರೆಯ, ಮರೆಸಬೇಡ ನನ್ನ ಹಸಿವ.
ನೊಂದ ಮನಕ್ಕೆ ಮುಳ್ಳೇರೆಯಬೇಡ, ಇಲ್ಲದಿರೊ ನೆಮ್ಮದಿಯ ನೀ ಕದಿಯಬೇಡ.
ಹೋಗು ನೆನಪೆ ನೀ ದೂರ, ಬರಿದಾದ ಮನಕ್ಕೆ ಮತ್ತೆ ತಂದೆ ನೀ ಬರ.
ಬಂದರೆ ಮನಕ್ಕೆ ಇನೆಲ್ಲಿ ಇದೆ ಉಳಿಗಾಲ.
ಅಳುತ್ತಿರುವ ಮನಕ್ಕೆ ಸವಿ ನೆನಪುಗಳು ಏಕೆ,
ನೆನೆದು ನೆನೆದು ಅಳುತ್ತಲೇ ಇರುವ ಪರಿಸ್ಥಿತಿ ಬೇಕೇ.
ಬೇಡವೆಂದು ತಳ್ಳಿದರು ದೂರ, ಮತ್ತೇಕೆ ಇಲ್ಲಸಲ್ಲದ ನೆಪವೊಡ್ಡಿ ಬರುವೆ ನೀ ಹತ್ತಿರ,
ಎಲ್ಲ ಮರೆತು ನೆಮ್ಮದಿಯ ಹುಡುಕಲು ಹೋರಟ ಮನಸಿಗೆ ಬೇಡಿಯ ಹಾಕಿ
ಮತ್ತೆ ಕರೆತಂದು ಕಣ್ಣಿರಿರಿಸುತ್ತಿರುವೆ ನೀ ನೆನಪೇ.
ಇರುವುದನೆಲ್ಲ ಹೊತ್ತು ಕೊಂಡು ಹೋದಳು ಉಸಿರೊಂದನ್ನ ಬಿಟ್ಟು ನನಗೆ,
ಇರುವುದೊಂದನ್ನ ಕದಿಯಲು ನೀನೇಕೆ ಬಂದೆ ನೆನಪೇ?

—- ನವೀನ್

Older Posts »

ವಿಭಾಗಗಳು